Geeta Bhagvat Satsang at Kalaburgi by Jyotsna Didi.
Initiative Summary
ಗೀತಾ ಭಾಗ ವತ ಸತ್ಸಂಗ ಮತ್ತು ಸಾಮೂಹಿಕ ತುಳಸಿ ಪೂಜೆ ಕಾರ್ಯಕ್ರಮ.
ಪರಮ ಪೂಜ್ಯ ಸಂತ ಶ್ರೀ ಆಸಾರಾಮಜಿ ಬಾಪೂಜಿ ರವರ ಪಾವನ ಪ್ರೇರಣೆಯಿಂದ ದಿ. 20 ರಿಂದ ಎರಡು ದಿನಗಳವರೆಗೆ ಶ್ರೀ ರಾಮ ಮಂದಿರ ಆವರಣದಲ್ಲಿ ಗೀತಾ ಭಾಗವತ ಸತ್ಸಂಗ ಹಾಗು ತುಳಸಿ ಪೂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಅಹಮದಾಬಾದ್ ಆಶ್ರಮದಿಂದ ಆಗಮಿಸುತ್ತಿರುವ ಪರಮ ಪೂಜ್ಯ ಸಂತ ಶ್ರೀ ಆಸಾರಾಮಜಿ ಬಾಪೂಜಿ ರವರ ಕೃಪಾ ಪಾತ್ರ ಶಿಷ್ಯ ಸಾದ್ವಿ ಜ್ಯೋತ್ಸಾ ಬೆಹೆನ್ ಅವರು ಪ್ರತಿ ದಿನ ಸಂಜೆ 5 ರಿಂದ 7 ಗಂಟೆವರೆಗೆ ಉಪದೇಶ ನೀಡಲಿದ್ದಾರೆ. ಡಿ. 25 ರಂದು ಆಚ ರಿಸಲಾಗುವ "ತುಳಸಿ ಪೂಜೆಯ ದಿನ ಹಾಗು ಫೆಬ್ರವರಿ 14 ರಂದು ಆಚರಿಸಲಾಗುವ "ಮಾತೃ ಪಿತೃ ಪೂಜೆಯ ದಿನದ ಮಹತ್ವದ ಬಗ್ಗೆಯೂ ಮಾಹಿತಿ ನೀಡಲಿದ್ದಾರೆ. ಆದ್ದರಿಂದ ತಾವೆಲ್ಲರೂ ಈ ಸತ್ತಂಗ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಲಬುರಗಿ ಆಶ್ರಮ ಸೇವಾ ಸಮಿತಿ ಅಧ್ಯಕ್ಷ ಎಸ್.ವೈ. ಪಾಟೀಲ್ ತಿಳಿಸಿದ್ದಾರೆ.