ಕೇವಲ 9 ಹಂತಗಳು ತುಳಸಿ ಪೂಜೆಯನ್ನು ಆಚರಿಸಲು.

,
Share this!! 👇🏻
Main image of ಕೇವಲ 9 ಹಂತಗಳು ತುಳಸಿ ಪೂಜೆಯನ್ನು ಆಚರಿಸಲು.

ತುಳಸಿ ಪೂಜೆಯ ದಿವಸ : ಡಿಸೆಂಬರ್ ೨೫

ಡಿಸೆಂಬರ್ ೨೫ಕ್ಕೆ 'ತುಲಸಿ ಪೂಜೆಯ ದಿವಸ' ವನ್ನು ಏಕೆ ಆಚರಿಸಬೇಕು ?

೧) ಈ ದಿನಗಳಲ್ಲಿ ಹಿಂದಿನ ವರ್ಷವನ್ನು ಬೀಳ್ಕೊಡುವ ಪಾಶ್ಚಾತ್ಯ ಅಂಧಾನುಕರಣೆಯಿಂದ ನಶೆಯ ಪದಾರ್ಥಗಳ ಸೇವನೆ, ಆತ್ಮಹತ್ಯೆ ಇತ್ಯಾದಿಗಳು ಹೆಚ್ಚಾಗುತ್ತಲಿವೆ. ತುಳಸಿಯು ಉತ್ತಮ ಕೀಳರಿಮೆಯ ನಿವಾರಕ ಮತ್ತು ಉತ್ಸಾಹ, ಸ್ಫೂರ್ತಿ, ಸಾತ್ವಿಕತೆಯ ವರ್ಧಕವಾಗಿರುವದರಿಂದ ಈ ದಿನಗಳಲ್ಲಿ ಈ ಪರ್ವವನ್ನು ಆಚರಿಸುವದು ವರದಾನ ಸ್ವರೂಪವಾಗಿರುವದು.

೨) ಧನುರ್ಮಾಸದಲ್ಲಿ ಎಲ್ಲಾ ಸಕಾಮ ಕರ್ಮಗಳು ವರ್ಜಿತವಾಗಿವೆ ಆದರೆ ಭಗವತ್ ಪ್ರೀತಿಯ ಸಲುವಾಗಿ ಮಾಡಿದ ಕರ್ಮಗಳು ವಿಶೇಷ ಫಲ ನೀಡುವುದು ಮತ್ತು ಪ್ರಸನ್ನತೆಯನ್ನು ನೀಡುವಂತಹದು. ಡಿಸೆಂಬರ್ ೨೫ ಧನುರ್ಮಾಸದ ನಡುವಿನ ಸಮಯವಾಗಿದೆ.

ವಿದೇಶಗಳಲ್ಲಿ ಕೂಡ ತುಳಸಿಯ ಪೂಜೆ ಆಗುತ್ತಿತ್ತು

ಕೇವಲ ಭಾರತದಲ್ಲಿ ಮಾತ್ರವಲ್ಲ ಹೊರತಾಗಿ ಎಷ್ಟೋ ಬೇರೆ ದೇಶಗಳಲ್ಲಿ ಕೂಡ ತುಳಸಿಯನ್ನು ಪೂಜನೀಯ ಹಾಗು ಶುಭವೆಂದು ತಿಳಿಯುವರು. ಗ್ರೀಸ್‌ನಲ್ಲಿ ಇಷ್ಟರ್ನ ಚರ್ಚನ ಹೆಸರಿನ ಸಂಪ್ರದಾಯದಲ್ಲಿ ತುಳಸಿಯ ಪೂಜೆ ಆಗುತ್ತಿತ್ತು ಮತ್ತು ಸೇಂಟ್ ಬೇಜಿಲ ಜಯಂತಿಯ ದಿವಸ 'ನೂತನ ವರ್ಷ ಭಾಗ್ಯಶಾಲಿಯಾಗಲಿ” ಎಂಬ ಭಾವನೆಯಿಂದ ಅರ್ಪಿಸಿದ ತುಳಸಿಯ ಪ್ರಸಾದವನ್ನು ಸ್ತ್ರೀಯರು ತಮ್ಮ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು.

ಕೇವಲ ೯ ಹಂತಗಳಲ್ಲಿ ತುಳಸಿ ಪೂಜೆಯ ಆಚರಣೆ

ತುಳಸಿ ಪೂಜೆಯ ವಿಧಿ:

ಡಿಸೆಂಬರ ೨೫ರ ಬೆಳಿಗ್ಗೆ ಬೇಗನೆ ಏಳಿ,ಸ್ನಾನದ ನಂತರ

ಹಂತ ೧- ಮನೆಯ ಸ್ವಚ್ಛ ಸ್ಥಾನದ ಮೇಲೆ ತುಳಸಿಯ ಕುಂಡವನ್ನು ನೆಲಕ್ಕಿಂತ ಸ್ವಲ್ಪ ಮೇಲೆ ಇಡಬೇಕು. ಹಂತ ೨- ಅದಕ್ಕೆ ಈ ಮಂತ್ರವನ್ನು ಹೇಳುತ್ತಾ ಜಲವನ್ನು ಅರ್ಪಿಸಿರಿ :

ಮಹಾಪ್ರಸಾದಜನನೀ ಸರ್ವಸೌಭಾಗ್ಯವರ್ಧಿನೀ ! ಅಧಿವ್ಯಾಧಿ ಹರರ್ನಿತ್ಯಂ ತುಲಸಿ ತ್ವಾಂ ನಮೋsಸ್ತುತೆ !!

महाप्रसादजननी सर्वसौभाग्यवर्धिनी । आधिव्याधि हरिर्नित्यं तुलसि त्वां नमोऽस्तुते ॥

Mahaaprasaadajanani Sarvasaubhaagyavardhinee । Aadhivyaadhi Harirnityam Tulsi Twaam NamostuTe ॥

ಹಂತ ೩- ನಂತರ ಈ ಮಂತ್ರವನ್ನು ಹೇಳುತ್ತಾ ತಿಲಕ ಹಚ್ಚಿಕೊಳ್ಳಿ:

ಓಂ ತುಳಸ್ಯೆ ನಮಃ

ॐ तुलस्यै नमः

(Tulsyai Namah)

ಹಂತ ೪- ನಂತರ ಅಕ್ಷತೆ, ಹೂವು , ವಸ್ತ್ರ ಮತ್ತು ಪ್ರಸಾದವನ್ನು ಅರ್ಪಿಸಿ.

ಹಂತ ೫- ನಂತರ ತುಳಸಿ ನಾಮಷ್ಟಕವನ್ನು ಪಟಿಸಿ- ತುಳಸಿ ನಾಮಾಷ್ಟಕ

ವೃಂದಾಂ ವೃಂದಾವನೀಂ ವಿಶ್ವಪಾವನೀಂ ವಿಶ್ವಪೂಜಿತಾಮ್ !

ಪುಷ್ಣಸಾರಾಂ ನಂದಿನೀಂ ಚ ತುಲಸೀಂ ಕೃಷ್ಣಜೀವನೀಮ್ !!

ಏತನ್ನಾಮಾಷ್ಟಕಂ ಚೈತತ್ರೋತ್ರಂ ನಾಮಾರ್ಥಸಂಯುತಮ್ !

ಯಃ ಪಠನ್ತಾಂ ಚ ಸಂಪೂಜ್ಯ ಸೋಽಶ್ವಮೇಧಫಲಂ ಲಭೇತ್ !!

Vrindaam Vrindaavaneem Vishwapaawaneem Vishwapoojitaam ।

Pushpasaaraam Nandineem Cha Tulseem Krishnajeevaneem ॥

Etannaamaashtakam Chaitatstotram naamaarthasanyutam ।

Yah Pathettaam Cha Sampoojya Soashwamedhafalam labhet ॥

ಹಂತ ೬- ದೀಪ ಉರಿಸಿ ಆರತಿ ಮಾಡಿ

ಹಂತ ೭- ತುಳಸಿಯ ೭, ೧೧, ೨೧, ೫೧ ಅಥವಾ ೧೧೧ ಪ್ರದಕ್ಷಿಣೆ ಹಾಕಿ.

ಹಂತ ೮- ಆ ಶುದ್ಧ ವಾತಾವರಣದಲ್ಲಿ ಶಾಂತರಾಗಿ ಸುಖಾಸನ ಅಥವಾ ಪದ್ಮಾಸನದಲ್ಲಿ ಕುಳಿತುಕೊಳ್ಳಿ ಭಗವತೀ ತುಳಸಿ ಮಾತೆಗೆ -ಪ್ರಾರ್ಥನೆ ಮಾಡಿ.

ಹಂತ ೯- ತುಳಸಿಯ ಹತ್ತಿರ ಕುಳಿತು ಪ್ರಾಣಾಯಾಮ ಮಾಡುವದರಿಂದ ಬಲ, ಬುದ್ಧಿ ಮತ್ತು ಓಜಸ್ಸು ಹೆಚ್ಚಾಗುತ್ತದೆ. ಮಧುರ ಪ್ರಸಾದವನ್ನು ತಯಾರಿಸಿ,ತುಳಸಿ ಎಲೆಗಳನ್ನು ಹಾಕಿ ಪ್ರಸಾದವನ್ನು ವಿತರಿಸಿ, ತುಳಸಿಯ ಹತ್ತಿರ ರಾತ್ರಿ ೧೨ ಘಂಟೆವರೆಗೆ ಜಾಗರಣೆ ಭಜನೆ, ಕೀರ್ತನೆ ಮತ್ತು ಜಪ ಮಾಡಿ ಭಗವದ್ ವಿಶ್ರಾಂತಿ ಪಡೆಯಿರಿ.

ತುಳಸಿ ನಮಷ್ಟಕದ ಲಾಭ-

💡> ಭಗವಂತ ನಾರಾಯಣ ದೇವರ್ಷಿ ನಾರದರಿಗೆ ಹೇಳುತ್ತಾನೆ : 'ವೃಂದಾ, ವೃಂದಾವನೀ, ವಿಶ್ವಪಾವನಿ, ವಿಶ್ವಪೂಜಿತಾ, ಪುಪ್ಪಸಾರಾ, ನಂದಿನಿ, ತುಳಸೀ ಮತ್ತು ಕೃಷ್ಣಾಜೀವಿನೀ - ಇದು ತುಳಸಿ ದೇವಿಯ ಎಂಟು ಹೆಸರುಗಳಾಗಿವೆ. ಇದು ಸಾರ್ಥಕ ನಾಮಾವಳಿ ಸ್ತೋತ್ರದ ರೂಪದಲ್ಲಿ ಪ್ರಚಲಿತವಾಗಿದೆ. ಯಾವ ಪುರುಷನು ತುಳಸಿಯ ಪೂಜೆ ಮಾಡಿ ಈ ನಾಮಾಷ್ಟಕದ ಪಠಣೆ ಮಾಡುತ್ತಾನೋ ಅವನಿಗೆ ಅಶ್ವಮೇಧ ಯಜ್ಞದ ಫಲವು ಸಿಗುತ್ತದೆ.' (ಬ್ರಹ್ಮವೈವರ್ತ ಪುರಾಣ, ಪ್ರಕೃತಿ ಖಂಡ : ೨೨.೩೨-೩೩)

ತುಳಸಿ ಪೂಜೆ ಹೇಗೆ ಮತ್ತು ಏಕೆ!

ತುಳಸಿ ಪೂಜೆಯನ್ನು ನಿಮ್ಮ ಹತ್ತಿರದ ಆಶ್ರಮ ಅಥವಾ ತುಳಸಿ ವನದಲ್ಲಿ ಅಥವಾ ಅನುಕೂಲವಾದ ಯಾವುದೇ ಪವಿತ್ರ ಸ್ಥಾನದಲ್ಲಿ ಮಾಡಬಹುದು.

Also Read...


    This News is Often associated with below Tags!


    Humanize the Effort!

    Do you think its helpful for you?
    You can help others too. Simply click below buttons to Tweet, Share or Send this on Twitter,Facebook, Whatsapp or Telegram. It's Free!